ಪುಟಗಳು

ಅಕ್ಷರ ಶೈಲಿಗಳ ಸಮಸ್ಯೆ

ಮೊಬೈಲ್ಗಳಲ್ಲಿ ಕೆಲವು ಅಕ್ಷರಶೈಲಿಗಳಲ್ಲಿನ

"ಷ" ಅಕ್ಷರ ಮೂಡುವಿಕೆ ತೊಂದರೆಗೆ ಪರಿಹಾರ

ಈ ಸಮಸ್ಯೆ ಮೊಬೈಲ್ಗಳಲ್ಲಿ ಮಾತ್ರ ಕಂಡುಬರುತ್ತದೆ, ಆಸ್ಕಿ ಅಕ್ಷರಶೈಲಿಗಳಲ್ಲಿ ಈ ರೀತಿಯ ಸಮಸ್ಯೆ ಬರುತ್ತದೆ. ಯೂನಿಕೋಡ್ ಅಕ್ಷರಶೈಲಿಗಳಿಗೆ ಅನ್ವಯವಾಗುವುದಿಲ್ಲ

Copy this text (ಇದನ್ನು ನಕಲು ಮಾಡಿಕೊಳ್ಳಿ) >>>>>    μ  ,

ನಂತರ ಹಳೆಯ μ ಇರುವ ಜಾಗದಲ್ಲಿ ಅಂಟಿಸಿ(Paste).

ಅದೊಂದು ಸಂಕೇತವನ್ನು ಮಾತ್ರ ನಕಲುಮಾಡಿಕೊಂಡು ಹಳೆಯ ಸಂಕೇತ ಇರುವಲ್ಲಿ ಅಂಟಿಸಿ




 ಡಿಸೆಂಬರ್ ತಿಂಗಳ ಮುಖ್ಯ ದಿನಗಳು

ಡಿ ೧. ವಿಶ್ವ ಏಡ್ಸ್ ದಿನ

ಡಿ.೨.ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ

ಡಿ.೪. ಅಂತರ ರಾಷ್ಟ್ರೀಯ ಚೀತಾ ದಿನ

ಡಿ.೪. ನೌಕಸೇನಾ ದಿನ

ಡಿ.೫.ವಿಶ್ವ ಮಣ್ಣು ದಿನ - ದ್ಯೇಯ ವಾಕ್ಯ - ಮಣ್ಣೆಂದರೆ ಅನ್ನದ ಆರಂಭ

ಡಿ.೭.  ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ

ಡಿ.೮. ಬೋಧಿ ದಿನ: ಬುದ್ಧನು ಜ್ಞಾನೋದಯ ಸಾಧಿಸಿದ ದಿನ

ಡಿ.೯. ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ

ಡಿ.೧೧. ಅಂತರರಾಷ್ಟ್ರೀಯ ಮೌಂಟೇನ್ (ಪರ್ವತ) ದಿನ

 ಭಾರತದ ಭೌಗೋಳಿಕ ಹಿನ್ನೆಲೆ

ಭಾರತದೇಶ ವಿವಿಧತೆಯಲ್ಲಿ ಏಕತೆ ಕಂಡ ದೇಶವಾಗಿದೆ, ಅದರಂತೆ ತನ್ನ ಹೆಸರಿನಲ್ಲಿ ವಿವಿಧತೆ ಇದೆ ಅವು

ಹಿಂದೂಸ್ತಾನ, ಪರ್ಯಾಯ ದ್ವೀಪ, ಇಂಡಿಯಾ, ಜಂಬೂದ್ವೀಪ, ಪುಟ್ಟಪ್ರಪಂಚ,ಉಪಖಂಡ,ಆರ್ಯಾವರ್ತ,ಇಂಡಿಯಾ, ಭರತಖಂಡ, ಭರಣವರ್ಷ, ಇತ್ಯಾದಿ.

ಭಾರತಕ್ಕೆ ಭಾರಣ/ಭರತಖಂಡ/ಭರತಭೂಮಿ ಎಂದು ಕರೆಯಲು ಕಾರಣ ಹೀಗಿವೆ

೧.ಜೈನ ಸಾಹಿತ್ಯದ ಪ್ರಕಾರ - ಭಾರತ ದೇಶವನ್ನು ಭರತಚಕ್ರವರ್ತಿಷ ಎಂಬಾತನು ಆಳುತ್ತಿದ್ದನು ಆದ್ಧರಿಂದ ಭಾರತ ಎಂಬ ಹೆಸರು ಬಂದಿದೆ.


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳು

 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳು

೧.ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು)

 ಕೃತಿ: ಶ್ರೀರಾಮಾಯಣದರ್ಶನಂ

 ವರ್ಷ: ೧೯೬೭

೨. ದತ್ತಾತ್ರೇಯ ರಾಮಚಂದ್ರ ಬೇಂದ್ರೆ

 ಕೃತಿ : ನಾಕುತಂತಿ

 ವರ್ಷ : ೧೯೭೩

೩. ಕೋಟಾ ಶಿವರಾಮ ಕಾರಂತ

 ಕೃತಿ : ಮೂಕಜ್ಜಿಯ ಕನಸುಗಳು

 ವರ್ಷ : ೧೯೭೭

೪. ಮಾಸ್ತಿ ವೆಂಕಟೇಶ ಅಯ್ಯಂಗಾರ್

ಕೃತಿ : ಚಿಕ್ಕವೀರ ರಾಜೇಂದ್ರ

ವರ್ಷ : ೧೯೮೩

೫. ವಿನಾಯಕ ಕೃಷ್ಣ ಗೋಕಾಕ್

 ಕೃತಿ : ಭಾರತ ಸಿಂಧೂ ರಶ್ಮಿ

 ವರ್ಷ : ೧೯೯೦

೬. ಉಡುಪಿ ರೋಜಗೋಪಾಲಾಚಾರ್ಯ ಅನಂತಮೂರ್ತಿ

 ಕೃತಿ: ಸಮಗ್ರ ಸಾಹಿತ್ಯ 

 ವರ್ಷ : ೧೯೯೪

೭. ಗಿರೀಶ್ ಕಾರ್ನಾಡ್ 

 ಕೃತಿ: ಸಮಗ್ರ ಸಾಹಿತ್ಯ 

 ವರ್ಷ : ೧೯೯೮

೮. ಚಂದ್ರಶೇಖರ ಕಂಬಾರ 

 ಕೃತಿ: ಸಮಗ್ರ ಸಾಹಿತ್ಯ 

 ವರ್ಷ : ೨೦೧೦

ವ್ಯಾಕರಣ

 ನಾಮಪದ

ಹೆಸರನ್ನು ಸೂಚಿಸುವ ಪದಗಳನ್ನು ನಾಮಪದಗಳು ಎನ್ನುವರು. ನಾಮಪದದ ಮೂಲ ರೂಪಗಳಿಗೆ ‘ನಾಮಪ್ರಕೃತಿ’ ಎನ್ನುವರು.

ಉದಾ: ಮನೆಯಲ್ಲಿ (ನಾಮಪದ), ಮನೆ (ನಾಮಪ್ರಕೃತಿ) ಅಲ್ಲಿ (ಪ್ರತ್ಯಯ)

ವಸ್ತು, ವ್ಯಕ್ತಿ, ಪ್ರಾಣಿ, ಸ್ಥಳ, ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳೆಲ್ಲವನ್ನೂ ನಾಮಪದ ಎನಿಸುವವು. ನಾಮಪದಗಳನ್ನು ಅವುಗಳ ಸ್ವರೂಪಕ್ಕೆ ಅನುಗುಣವಾಗಿ ಅನೇಕ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.

(೧) ವಸ್ತುವಾಚಕಗಳು ಅಥವಾ ನಾಮವಾಚಕ

(೨) ಗುಣವಾಚಕಗಳು

(೩) ಸಂಖ್ಯಾವಾಚಕಗಳು

(೪) ಸಂಖ್ಯೇಯವಾಚಕಗಳು

(೫) ಭಾವನಾಮಗಳು

(೬) ಪರಿಮಾಣವಾಚಕಗಳು

(೭) ಪ್ರಕಾರವಾಚಕಗಳು

(೮) ದಿಗ್ವಾಚಕಗಳು

(೯) ಸರ್ವನಾಮಗಳು

೧.ವಸ್ತುವಾಚಕಗಳು

ವಸ್ತುಗಳ ಹೆಸರನ್ನು ಹೇಳುವ ಶಬ್ದಗಳೆಲ್ಲ ವಸ್ತುವಾಚಕಗಳು.

ಉದಾಹರಣೆಗೆ:- ಚೇತನವುಳ್ಳ ವಸ್ತುಗಳು-ಮಾನವ, ಹುಡುಗಿ, ಗೌರಿ, ಮಹೇಶ, ಅಜ್ಜ, ನಾಯಿ, ಬೆಕ್ಕು, ಆನೆ ಮುಂತಾದವು.

ಚೇತನವಿಲ್ಲದ ವಸ್ತುಗಳು-ಮಣ್ಣು, ಗಿಡ, ಭೂಮಿ, ಜಲ, ಎಲೆ, ಹೂವು, ಹಣ್ಣು, ಕಾಯಿ, ಬೆಟ್ಟ, ಕಾಡು, ಶಾಲೆ ಮಠ, ಮನೆ, ಪುಸ್ತಕ-ಮುಂತಾದವು.

ವಸ್ತುವಾಚಕಗಳಲ್ಲಿ (೧) ರೂಢನಾಮ, (೨) ಅಂಕಿತನಾಮ, (೩) ಅನ್ವರ್ಥಕನಾಮ ಎಂದು ಮೂರು ವಿಧ.

(ಅ) ರೂಢನಾಮ - ರೂಢಿಯಿಂದ ಬಂದ ಸಾಮಾನ್ಯವಾಚಕಗಳೇ ರೂಢನಾಮಗಳು.

ಉದಾಹರಣೆಗೆ: ನದಿ, ಕಾಡು, ಪರ್ವತ, ಮನುಷ್ಯ, ಹೆಂಗಸು, ಹುಡುಗ, ನಗರ, ದೇಶ-ಇತ್ಯಾದಿಗಳು.

ಇಲ್ಲಿ ಬಂದಿರುವ ನದಿ, ಕಾಡು ಇತ್ಯಾದಿ ಶಬ್ದಗಳು ಎಲ್ಲ ನದಿಗಳಿಗೂ ಎಲ್ಲ ಕಾಡಿಗೂ ಅನ್ವಯಿಸುವ ಸಾಮಾನ್ಯವಾಚಕಗಳು.

(ಆ) ಅಂಕಿತನಾಮ - ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳೇ ಅಂಕಿತ ನಾಮಗಳು. 

ಅಂದರೆ ರೂಢನಾಮಗಳಿಗೆ ಇಟ್ಟ ಹೆಸರುಗಳು.

ಉದಾಹರಣೆಗೆ:-ಗಂಗಾ, ಗೋದಾವರಿ, ಗೋಮತಿ, ಕಾವೇರಿ, ಹಿಮಾಲಯ, ಸಹ್ಯಾದ್ರಿ, ಶಂಕರ, ರಂಗ, ಭೀಮ, ಸಾವಿತ್ರಿ, ಧಾರವಾಡ, ಭಾರತ, ಕರ್ನಾಟಕ, ಆಲ, ಬೇವು, ಮಾವು-ಇತ್ಯಾದಿಗಳು.

(ಇ) ಅನ್ವರ್ಥಕನಾಮ : ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೇ ಅನ್ವರ್ಥಕನಾಮಗಳು.

ಉದಾಹರಣೆಗೆ:-ಕುಂಟ, ಹೆಳವ, ಕಿವುಡ, ವಿಜ್ಞಾನಿ, ವ್ಯಾಪಾರಿ, ವಿದ್ವಾಂಸ, ಶಿಕ್ಷಕ, ರೋಗಿ, ವೈದ್ಯ, ಯೋಗಿ-ಇತ್ಯಾದಿಗಳು.

(೧) ಗುಣವಾಚಕ : ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳೆಲ್ಲಾ ಗುಣವಾಚಕ ಎನಿಸುವುವು.

ಉದಾಹರಣೆಗೆ:-ದೊಡ್ಡ, ಕಿರಿದು, ಹಳೆಯ, ಕೆಟ್ಟದು, ಬಿಳಿದು, ಹಿರಿದು -ಇತ್ಯಾದಿ.

(೨) ಸಂಖ್ಯಾವಾಚಕ : ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲ ಸಂಖ್ಯಾವಾಚಕಗಳು. 

ಉದಾಹರಣೆಗೆ:- ಎರಡು, ಹತ್ತು, ನೂರು, ಸಾವಿರ, ಲಕ್ಷ, ಕೋಟಿ ಮೂವರು -ಇತ್ಯಾದಿ.

(೩) ಸಂಖ್ಯೇಯವಾಚಕ : ಸಂಖ್ಯೆಯಿಂದ ಕೂಡಿದ ಶಬ್ದಗಳೇ ಸಂಖ್ಯೇಯವಾಚಕಗಳು. 

ಉದಾಹರಣೆಗೆ:- ಮೂರನೆಯ, ಇಮ್ಮಡಿ, ಪಂಚಾಮೃತ -ಇತ್ಯಾದಿ.

(೪) ಭಾವನಾಮ : ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದಗಳೆಲ್ಲ ಭಾವನಾಮಗಳು.

ಉದಾಹರಣೆಗೆ:- ಆಟ, ನೋಟ, ಕರ್ಪು, ಕೆಂಪು, ಪೆಂಪು -ಇತ್ಯಾದಿ.

(೫) ಪರಿಮಾಣವಾಚಕ : ಸಾಮಾನ್ಯ ಅಳತೆ, ಪರಿಮಾಣ, ಗಾತ್ರ -ಇತ್ಯಾದಿಗಳನ್ನು ಹೇಳುವ ಶಬ್ದಗಳು ಪರಿಮಾಣವಾಚಕಗಳು. 

ಉದಾಹರಣೆಗೆ:-ಹಲವು, ಕೆಲವು, ಅನಿತು, ಇನಿತು, ಅಷ್ಟು, ಇಷ್ಟು, ಎನಿತು, ಪಲವು -ಇತ್ಯಾದಿ.

(೬) ಪ್ರಕಾರವಾಚಕ : ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳು. 

ಇವೂ ಒಂದು ರೀತಿಯ ಗುಣವಾಚಕಗಳೇ ಆಗಿವೆ.

ಉದಾಹರಣೆಗೆ:- ಎಂತಹ, ಎಂಥ, ಇಂಥ, ಇಂಥದು, ಅಂಥ, ಅಂತಹುದು, ಇಂತಹುದು, ಅಂಥವನು, ಅಂಥವಳು, ಅಂಥದು, ಅಂತಹವನು, ಇಂತಹವನು -ಇತ್ಯಾದಿ. 

(೭) ದಿಗ್ವಾಚಕ : ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳೆಲ್ಲ ದಿಗ್ವಾಚಕಗಳು.

ಉದಾಹರಣೆಗೆ:- ಆಚೆ, ಈಚೆ ಉತ್ತರ, ಬಡಗಲು, ಬಡಗಣ, ದಕ್ಷಿಣ, ತೆಂಕಲು, ತೆಂಕಣ, ಪೂರ್ವ, ಮೂಡಲು, ಮೂಡಣ, ಪಶ್ಚಿಮ, ಪಡುವಲು, ಪಡುವಣ, ಈಶಾನ್ಯ, ವಾಯವ್ಯ, ಆಗ್ನೇಯ, ನೈಋತ್ಯ -ಇತ್ಯಾದಿ.

(೮) ಸರ್ವನಾಮ : ವಸ್ತುವಾಚಕಗಳಾದ ನಾಮಪದಗಳ ಸ್ಥಾನದಲ್ಲಿ ನಿಂತು ಅವುಗಳನ್ನು ಸೂಚಿಸುವ 

(ಬೋಧಿಸುವ) ಶಬ್ದಗಳೇ ಸರ್ವನಾಮಗಳು.

ಸರ್ವನಾಮಗಳಲ್ಲಿ ಮೂರು ವಿಧ

(೧) ಪುರುಷಾರ್ಥಕ ಸರ್ವನಾಮಗಳು.

(೨) ಪ್ರಶ್ನಾರ್ಥಕ ಸರ್ವನಾಮಗಳು.

(೩) ಆತ್ಮಾರ್ಥಕ ಸರ್ವನಾಮಗಳು.

೧. ಪುರುಷಾರ್ಥಕ ಸರ್ವನಾಮಗಳು: ಉತ್ತಮ ಪುರುಷ, ಮಧ್ಯಮ ಪುರುಷ ಮತ್ತು ಪ್ರಥಮ ಪುರುಷ

ಕ್ರಮ ಸಂಖ್ಯೆ  |ಪುರುಷಾರ್ಥಕಗಳು    |ಏಕವಚನ            |ಬಹುವಚನ

೧                 |ಉತ್ತಮ ಪುರುಷ        |ಸರ್ವನಾಮಗಳು   |ನಾನು ನಾವು

೨                 |ಮಧ್ಯಮ ಪುರುಷ       |ಸರ್ವನಾಮಗಳು   |ನೀನು ನೀವು

೩                 |ಪ್ರಥಮ ಪುರುಷ         |ಸರ್ವನಾಮಗಳು   |ಅವನು, ಅವಳು,ಅದು. ಅವರು, ಅವು|

೨. ಪ್ರಶ್ನಾರ್ಥಕ ಸರ್ವನಾಮಗಳು: ಪ್ರಶ್ನೆಗೆ ಸಂಬಂಧಿಸಿದ ಶಬ್ದಗಳು ಹಾಗೂ ಹೆಸರುಗಳು

ಉದಾಹರಣೆಗೆ:- ಯಾವುದು? ಯಾರು? ಏನು? ಏತರದು? ಆವುದು? ಏನ್? ಇತ್ಯಾದಿ.

೩. ಆತ್ಮಾರ್ಥಕ ಸರ್ವನಾಮಗಳು

ಉದಾಹರಣೆಗೆ:- ತಾನು, ತಾವು ತನ್ನ, ತಮ್ಮ.

ಲಿಂಗಗಳು

ಲಿಂಗವೆನ್ನುವುದರ ಮೂಲ ಅರ್ಥ ಲಕ್ಷಣ ಮತ್ತು ಗುರುತು. ಕನ್ನಡ ಭಾಷೆಯಲ್ಲಿ ಸ್ವಭಾವಕ್ಕನುಗುಣವಾಗಿ 

ಲಿಂಗವ್ಯವಸ್ಥೆ ಇದೆ. ಅವುಗಳಲ್ಲಿ ಮುಖ್ಯವಾಗಿ ೩ ವಿಧಗಳಿವೆ.

೧) ಪುಲ್ಲಿಂಗ ೨) ಸ್ತ್ರೀಲಿಂಗ ೩) ನಪುಂಸಕಲಿಂಗ

೧) ಪುಲ್ಲಿಂಗ : ಮನುಷ್ಯ ಸಂಬಂಧಿ ಪದಗಳಲ್ಲಿ ‘ಗಂಡು’ ಎಂಬರ್ಥವನ್ನು ಸೂಚಿಸುವ ಶಬ್ದಗಳು ‘ಪುಲ್ಲಿಂಗ’ ವೆನಿಸುತ್ತವೆ.

ಉದಾ : ಸುಯೇಶ, ಪಂಡಿತ, ರಹಿಮ, ಭೀಮ, ಜಾನ್, ಕವಿ, ಶಿಕ್ಷಕ, ಹುಡುಗ ಇತ್ಯಾದಿ.

೨) ಸ್ತ್ರೀಲಿಂಗ : ಮನುಷ್ಯ ಸಂಬಂಧಿ ಪದಗಳಲ್ಲಿ ‘ಹೆಣ್ಣು’ ಎಂಬರ್ಥವನ್ನು ಸೂಚಿಸುವ ಶಬ್ದಗಳು ‘ಸ್ತ್ರೀಲಿಂಗ’ ವೆನಿಸುತ್ತವೆ.

ಉದಾ : ರಾಣಿ, ಗಂಗೆ, ತಾಯಿ, ಫಾತಿಮಾ, ಹುಡುಗಿ, ಕವಯಿತ್ರಿ ಇತ್ಯಾದಿ.

೩) ನಪುಂಸಕಲಿಂಗ : ಮನುಷ್ಯರಲ್ಲಿ ಸ್ಪಷ್ಟವಾಗಿ `ಗಂಡು’ ಅಥವಾ `ಹೆಣ್ಣು’ ಎಂದು ಸೂಚಿಸುವ ಶಬ್ದಗಳನ್ನು ಹೊರತುಪಡಿಸಿದ ಎಲ್ಲ ಶಬ್ದಗಳನ್ನು ನಪುಂಸಕಲಿಂಗ ಎನ್ನುವರು. ಪ್ರಾಣಿಗಳ ಹೆಸರುಗಳು ಸ್ಪಷ್ಟವಾಗಿ ‘ಗಂಡು’ ಅಥವಾ ‘ಹೆಣ್ಣು’ ಎಂದು ಸೂಚಿತವಾದರೂ ಅವನ್ನು ಪುಲ್ಲಿಂಗ ಅಥವಾ ಸ್ತ್ರೀಲಿಂಗ ಎಂದು ಪರಿಗಣಿಸದೆ ನಪುಂಸಕಲಿಂಗ ಎಂದೇ ಪರಿಗಣಿಸಬೇಕು.

ಉದಾ : ಮಗು, ಕರು, ಪ್ರಾಣಿ, ಕಲ್ಲು, ಜನ, ಕೋಣ, ಆಕಳು ಇತ್ಯಾದಿ. 

ಕನ್ನಡದಲ್ಲಿ ಎಲ್ಲಾ ಪ್ರಾಣಿಗಳನ್ನು ನಪುಂಸಕ ಲಿಂಗವೆಂದೇ ಪರಿಗಣಿಸಲಾಗುವುದು.

ವಚನಗಳು

ವಚನ ಎಂದರೆ ಸಂಖ್ಯೆಯನ್ನು ಸೂಚಿಸುವ ಪದ ಕನ್ನಡದಲ್ಲಿ ಎರಡು ರೀತಿಯ ವಚನಗಳಿವೆ. 

೧) ಏಕವಚನ ೨) ಬಹುವಚನ

ಏಕವಚನ : ಒಂದು ವಸ್ತುವನ್ನು ಹೇಳುವ ಪದಕ್ಕೆ ‘ಏಕವಚನ’ ಎನ್ನುವರು.

ಉದಾ : ಹುಡುಗ, ಶಾಲೆ, ಮಗು, ಹುಡುಗಿ, ಗಿಡ, ಪ್ರಾಣಿ

ಬಹುವಚನ : ಎರಡು ಅಥವಾ ಎರಡಕ್ಕಿಂತ ಹೆಚ್ಚು ವಸ್ತುಗಳನ್ನು ಸೂಚಿಸುವ ಪದವನ್ನು ‘ಬಹುವಚನ’ ಎನ್ನುವರು.

ಉದಾ : ಹುಡುಗರು, ಶಾಲೆಗಳು, ಮಕ್ಕಳು, ಹುಡುಗಿಯರು, ಗಿಡಗಳು, ಪ್ರಾಣಿಗಳು

ವಿಭಕ್ತಿ ಪ್ರತ್ಯಯಗಳು

ನಾಮ ಪ್ರಕೃತಿಗಳ ಮುಂದೆ ಸೇರಿಕೊಂಡು ಬೇರೆ ಬೇರೆ ಸಂಬಂಧಗಳ ಅರ್ಥ ಉಂಟು ಮಾಡುವ ಪ್ರತ್ಯಯಗಳಿಗೆ ವಿಭಕ್ತಿ ಪ್ರತ್ಯಯಗಳು ಎಂದು ಹೆಸರು. ಇವುಗಳಿಗೆ ಕಾರಕಗಳು ಎಂದೂ ಹೆಸರಿದೆ. ಇವು ಸಂಬಂಧಕಾರಕಗಳು. ಅದಕ್ಕೇ ಈ ಹೆಸರು.

ಏಳು ವಿಭಕ್ತಿಗಳಿವೆ. ಹಾಗೆಯೇ ಅವುಗಳಿಗೆ ಏಳು ಪ್ರತ್ಯಯಗಳಿವೆ.

      ವಿಭಕ್ತಿಯ ಹೆಸರು    |ಕಾರಕಗಳು|  ವಿಭಕ್ತಿ ಪ್ರತ್ಯಯಗಳು         ಉದಾಹರಣೆ

೧.    ಪ್ರಥಮಾ ವಿಭಕ್ತಿ       ಕರ್ತ್ರರ್ಥ     ಉ                            ಮರ+ಉ = ಮರವು

೨.    ದ್ವಿತೀಯಾ ವಿಭಕ್ತಿ      ಕರ್ಮಾರ್ಥ

  ಅನ್ನು                        ಮರ+ಅನ್ನು = ಮರವನ್ನು

೩.    ತೃತೀಯಾ ವಿಭಕ್ತಿ      ಕರಣಾರ್ಥ  ಇಂದ                        ಮರ+ಇಂದ = ಮರದಿಂದ

೪.    ಚತುರ್ಥೀ ವಿಭಕ್ತಿ     ಸಂಪ್ರದಾನ  ಗೆ/ಕೆ/ಇಗೆ/ಕ್ಕೆ                ಮರ+ಕ್ಕೆ = ಮರಕ್ಕೆ ಮನೆಗೆ, ಹೆಸರಿಗೆ, ಅದಕ್ಕೆ

೫.   ಪಂಚಮೀ ವಿಭಕ್ತಿ    ಅಪಾದಾನ  ದೆಸೆಯಿಂದ             ಮರ+ದೆಸೆಯಿಂದ=ಮರದ  ದೆಸೆಯಿಂದ

೬.   ಷಷ್ಠೀ ವಿಭಕ್ತಿ                ಸಂಬಂಧ     ಅ                            ಮರ+ಅ = ಮರದ

೭.    ಸಪ್ತಮೀ ವಿಭಕ್ತಿ            ಅಧಿಕರಣ   ಅಲ್ಲಿ                      ಮರ+ಅಲ್ಲಿ = ಮರದಲ್ಲಿ

೮. ಸಂಬೋಧನಾ            ಕರೆಯುವಿಕೆ    ಅ, ಇರಾ, ಆ, ಏ, ಈ   


ಗಮನಿಸಿ: ಹೊಸಗನ್ನಡದಲ್ಲಿ ಪ್ರಥಮಾ ವಿಭಕ್ತಿಯನ್ನು ಬಿಟ್ಟು ಬಳಸುವ ಪರಿಪಾಟವಿದೆ. 

ಉದಾ: ಹುಡುಗನು ಬಂದನು ಎಂಬುದಕ್ಕೆ ಹುಡುಗ ಬಂದನು ಎಂದೂ ಬಳಸುವರು. ಅದೇ ರೀತಿ 

ಪಂಚಮೀ ವಿಭಕ್ತಿಯ ಬದಲು ತೃತೀಯಾ ವಿಭಕ್ತಿಯನ್ನೇ ಬಳಸುವರು. 

ಉದಾ: ‘ಮರದ ದೆಸೆಯಿಂದ’ ಎಂಬುದನ್ನು ‘ಮರದಿಂದ’ ಎಂದು ಬಳಸುತ್ತಾರೆ.

 ಅನುಭವದಿಂದ ಕಲಿವ ಪಾಠವನ್ನು ಯಾವ ಗ್ರಂಥದಿಂದಲೂ ಕಲಿಯಲು ಸಾಧ್ಯವಿಲ್ಲ

ಸಂಧಿಗಳು

 ಕನ್ನಡ ಸಂಧಿಗಳು :

೧. ಲೋಪಸಂಧಿ : ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು. ಇದಕ್ಕೆ ಲೋಪಸಂಧಿ ಎಂದು ಹೆಸರು. 

ಉದಾ: 

ತುಪ್ಪಳದ + ಅಂತೆ = ತುಪ್ಪಳದಂತೆ - ಅ ಕಾರ ಲೋಪ

ಅಲ್ಲಿ + ಇದ್ದೇನೆ = ಅಲ್ಲಿದ್ದೇನೆ - ಇ ಕಾರ ಲೋಪ 

ಇವನು + ಒಬ್ಬ = ಇವನೊಬ್ಬ - ಉ ಕಾರ ಲೋಪ

ಬೆಳ್ಳಗೆ + ಆಗಿ = ಬೆಳ್ಳಗಾಗಿ - ಎ ಕಾರ ಲೋಪ

೨. ಆಗಮಸಂಧಿ : ಸ್ವರದ ಮುಂದೆ ಸ್ವರವು ಬಂದು ಸಂಧಿಯಾದಾಗ ಪೂರ್ವಪದದ ಕೊನೆಯ ಸ್ವರ ಹಾಗೂ ಉತ್ತರ ಪದದ ಮೊದಲ ಸ್ವರಗಳ ಮಧ್ಯದಲ್ಲಿ ‘ಯ್’ ಕಾರವನ್ನು ಅಥವಾ ‘ವ’ ಕಾರವನ್ನು ಹೊಸದಾಗಿ ಸೇರಿಸಿ ಹೇಳಿದರೆ ಅದು ಆಗಮಸಂಧಿ.

ಉದಾ: 

ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ

ಭಾವನೆ + ಉಂಟಾಯಿತು = ಭಾವನೆಯುಂಟಾಯಿತು

ಗುರು + ಅನ್ನು = ಗುರುವನ್ನು

ಸ್ವಾರಸ್ಯ + ಇಲ್ಲ = ಸ್ವಾರಸ್ಯವಿಲ್ಲ

೩. ಆದೇಶಸಂಧಿ : ಉತ್ತರ ಪದದ ಆದಿಯಲ್ಲಿರುವ ಕ,ತ,ಪ ವ್ಯಂಜನಗಳಿಗೆ ಕ್ರಮವಾಗಿ ಗ,ದ,ಬ ವ್ಯಂಜನಗಳು ಆದೇಶವಾಗುವುವು. ಇದನ್ನು ಆದೇಶಸಂಧಿ ಎನ್ನುವರು. ಕೆಲವೊಮ್ಮೆ ಉತ್ತರ ಪದದ ಆದಿಯ ಪ್, ಬ್, ಮ್ ವ್ಯಂಜನಗಳಿಗೆ ‘ವ’ ಕಾರವು ಆದೇಶವಾಗುವುದು. 

ಉದಾ: 

ತುದಿ + ಕಾಲಲ್ಲಿ (ಕ್>ಗ್) = ತುದಿಗಾಲಲ್ಲಿ

ಹುಲಿ + ತೊಗಲು (ತ್>ದ್) = ಹುಲಿದೊಗಲು

ಕಣ್ + ಪನಿ (ಪ್>ಬ್) = ಕಂಬನಿ

ನೀರ್ + ಪನಿ (ಪ್>ವ್) = ನರ‍್ವನಿ

 ಕಡು + ಬೆಳ್ಪು (ಬ್>ವ್) = ಕಡುವೆಳ್ಪು

 ಮೆಲ್ + ಮಾತು (ಮ್>ವ್) = ಮೆಲ್ವಾತು

ನಮೂದಿತ ಎರಡು ವಾಕ್ಯಗಳಲ್ಲಿರುವ ರಾಮಾಯಣ, ಮಹೋನ್ನತ, ಗ್ರಂಥ, ಸರ‍್ಯೋದಯ, ದೃಶ್ಯ, 

ಅತ್ಯಂತ, ಮನೋಹರ - ಎಲ್ಲವೂ ಸಂಸ್ಕೃತ ಪದಗಳು. ಆದರೆ ಕನ್ನಡ ಪದಗಳೆಂದು ಪರಿಗಣಿಸಲ್ಪಟ್ಟಿವೆ. ಹೀಗೆ ಕನ್ನಡ ಭಾಷೆಗೆ ಸಂಸ್ಕೃತ ಪದಗಳು ಸೇರ್ಪಡೆಯಾಗಿವೆ. ಇಂತಹ ಸಂಸ್ಕೃತ ಪದಗಳೇ ಸೇರಿ ಸಂಧಿಯಾದರೆ ಅವುಗಳನ್ನು ಸಂಸ್ಕೃತಸಂಧಿ ಎಂದು ಕರೆಯಲಾಗುತ್ತದೆ. ಎರಡು ಸ್ವರಗಳ ನಡುವೆ ಸಂಧಿಯಾದರೆ ಅದು ಸ್ವರಸಂಧಿ. ಸ್ವರಕ್ಕೆ ವ್ಯಂಜನ ಅಥವಾ ವ್ಯಂಜನಕ್ಕೆ ವ್ಯಂಜನ ಸೇರಿ ಸಂಧಿಯಾದರೆ ಅದು ವ್ಯಂಜನಸಂಧಿ.


ಸಂಸ್ಕೃತ ಸ್ವರಸಂಧಿಗಳು 

ಸವರ್ಣದೀರ್ಘ ಸಂಧಿ 

- ವಿದ್ಯಾಭ್ಯಾಸ ಮಾಡು.

- ರವೀಂದ್ರನು ಹಾಡಿದನು.

- ಗುರೂಪದೇಶವನ್ನು ಪಡೆ.

ಈ ಹೇಳಿಕೆಗಳಲ್ಲಿರುವ ವಿದ್ಯಾಭ್ಯಾಸ, ರವೀಂದ್ರ, ಗುರೂಪದೇಶ ಪದಗಳನ್ನು ಗಮನಿಸಿ.

ವಿದ್ಯಾ + ಅಭ್ಯಾಸ > ವಿದ್ಯಾಭ್ಯಾಸ

ದ್ + ಯ್ + ಆ + ಅ > ದ್ + ಯ್ + ಆ

ಇಲ್ಲಿ ಪೂರ್ವಪದದ ಕೊನೆಯಲ್ಲಿರುವ -ಆ ಸ್ವರದ ಮುಂದೆ ಪರಪದದ ಆದಿಯಲ್ಲಿ ‘ಅ’- ಸ್ವರ ಇರುವುದು. ಇವೆರಡೂ ಸ್ವರಗಳು ಒಂದೇ ಸ್ಥಾನದಲ್ಲಿ ಹುಟ್ಟುವುದರಿಂದ ಇವು ಸವರ್ಣಗಳು. ಈ ಸವರ್ಣ ಸ್ವರಗಳು ಸಂಧಿಯಾದಾಗ ದೀರ್ಘಸ್ವರವಾಗಿ ಪರಿವರ್ತನೆಯಾಗುತ್ತವೆ. ಹಾಗಾಗಿ ಇದನ್ನು ಸವರ್ಣ ದೀರ್ಘ ಸಂಧಿ ಎಂದು ಕರೆಯಲಾಗಿದೆ. (ಅ, ಆ; ಇ, ಈ; ಉ, ಊ; ಇವು ಸವರ್ಣಸ್ವರಗಳು)

ಉದಾ :

ರವಿ + ಇಂದ್ರ > ರವೀಂದ್ರ

ವ್ + ಇ + ಇ > ವ್ + ಈ

ಇಲ್ಲಿ ಎರಡು ‘ಇ’ ಕಾರಗಳು ಸೇರಿ ‘ಈ’ ಕಾರವಾಗಿದೆ.

ಗುರು + ಉಪದೇಶ > ಗುರೂಪದೇಶ

ರ್ + ಉ + ಉ > ರ್ + ಊ

ಇಲ್ಲಿ ಎರಡು ‘ಉ’ ಕಾರಗಳು ಸೇರಿ ‘ಊ’ ಕಾರ ಆಗಿದೆ. 

ಹಾಗಾಗಿ ಇವು ಕೂಡಾ ಸವರ್ಣದೀರ್ಘ ಸಂಧಿಗೆ ಉದಾಹರಣೆಗಳು.

ಸೂತ್ರ : ಸವರ್ಣಸ್ವರಗಳು ಒಂದರ ಮುಂದೆ ಒಂದು ಸೇರಿ ಸಂಧಿಯಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬಂದರೆ ಅದನ್ನು ಸವರ್ಣ ದೀರ್ಘಸಂಧಿ ಎಂದು ಕರೆಯುವರು.

ಉದಾ: ಸಭಾಂಗಣ, ದೇವಾಲಯ, ರವೀಶ, ವಧೂಪೇತ. 

ಗುಣಸಂಧಿ 

- ದೇವೇಂದ್ರನ ಸಭೆ.

- ಸೂರ‍್ಯೋದಯವಾಯಿತು.

_ ಮಹರ್ಷಿಯು ತಪವನ್ನು ಮಾಡುವನು.

ಇಲ್ಲಿರುವ ದೇವೇಂದ್ರ,ಸೂರ‍್ಯೋದಯ ಮತ್ತು ಮಹರ್ಷಿ ಪದಗಳನ್ನು ಗಮನಿಸಿ.

ದೇವ + ಇಂದ್ರ > ದೇವೇಂದ್ರ

ವ್ + ಅ + ಇಂ > ವ್ + ಏಂ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಅ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಇ’ ಕಾರ ಸೇರಿ ‘ಏ’ ಕಾರ ಆದೇಶವಾಗಿದೆ. 

ಸೂರ‍್ಯ+ ಉದಯ >ಸೂರ‍್ಯೋದಯ

ರ್ + ಯ್ + ಅ + ಉ > ರ್ + ಯ್ + ಓ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಅ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಉ’ ಕಾರ 

 ಸೇರಿ ‘ಓ’ ಕಾರ ಆದೇಶವಾಗಿ ಬಂದಿದೆ. 

ಮಹಾ + ಋಷಿ > ಮಹರ್ಷಿ

ಹ್ + ಆ + ಋ > ಹ್ + ಅರ್

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಆ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಋ’ ಕಾರ  ಸೇರಿ ‘ಅರ್’ ಕಾರ ಆದೇಶವಾಗಿ ಬಂದಿದೆ.

ಸೂತ್ರ : ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಏ’ ಕಾರವೂ ಉ ಊ ಕಾರಗಳು ಪರವಾದರೆ ‘ಓ’ ಕಾರವೂ ‘ಋ’ ಕಾರ ಪರವಾದರೆ ‘ಅರ್’ ಕಾರವೂ 

ಆದೇಶವಾಗಿ ಬಂದರೆ ಅದು ಗುಣಸಂಧಿ.

ಉದಾ: ಸುರೇಂದ್ರ, ಮಹೇಶ್ವರ, ಚಂದ್ರೋದಯ, ದೇವರ್ಷಿ.

ವೃದ್ಧಿಸಂಧಿ 

 - ಅವನು ಏಕೈಕ ವೀರ.

 - ಆಯುರ್ವೇದದಲ್ಲಿ ವನೌಷಧಗಳನ್ನು ಬಳಸುತ್ತಾರೆ.

ಇಲ್ಲಿರುವ ಏಕೈಕ ಪದವನ್ನು ಗಮನಿಸಿ.

 ಏಕ + ಏಕ > ಏಕೈಕ

 ಕ್ + ಅ + ಏ > ಕ್ + ಐ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಅ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಏ’ ಕಾರವು ಪರವಾಗಿ ಸಂಧಿಯಾದಾಗ ‘ಐ’ ಕಾರವು ಏಕಾದೇಶವಾಗಿ ಬಂದಿದೆ. 

 ವನ + ಓಷಧ > ವನೌಷಧ

 ನ್ + ಅ + ಓ > ನ್ + ಔ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಅ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಓ’ ಕಾರವು ಪರವಾಗಿ ಸಂಧಿಯಾದಾಗ ‘ಔ’ ಕಾರವು ಏಕಾದೇಶವಾಗಿ ಬಂದಿದೆ.

ಸೂತ್ರ : ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದಾಗ ಅವೆರಡರ ಸ್ಥಾನದಲ್ಲಿ ‘ಐ’ ಕಾರವೂ ಓ ಔ ಕಾರಗಳು ಪರವಾದಾಗ ‘ಔ’ ಕಾರವೂ ಆದೇಶವಾಗಿ ಬಂದರೆ (ಐ, ಔ ಕಾರಗಳು ಆದೇಶವಾಗಿ ಬಂದಾಗ) ಅದೇ ವೃದ್ಧಿಸಂಧಿ.

ಉದಾ : ಲೋಕೈಕ, ಜನೈಕ್ಯ, ಜಲೌಘ. 

ಯಣ್‌ಸಂಧಿ

ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ‘ಯಣ್’ ಎಂಬ ಸಂಜ್ಞೆಯೂ ಒಂದು. ಯ್ ರ್ ಲ್ ವ್ ಎಂಬ ನಾಲ್ಕು ವ್ಯಂಜನಗಳನ್ನು ಯಣ್ ಅಕ್ಷರಗಳೆಂದು ಗುರುತಿಸಲಾಗಿದೆ. ಸಂಧಿಯಾಗುವಾಗ ಯಣ್ ಅಕ್ಷರಗಳಲ್ಲಿ ಯಾವುದಾದರೂ ಒಂದು ಅಕ್ಷರ ಆದೇಶವಾಗಿ ಬಂದರೆ ಅದೇ ಯಣ್ ಸಂಧಿ. 

- ಅವನು ಅತ್ಯಂತ ಪರಾಕ್ರಮಿ.

_ ಯುದ್ಧದಲ್ಲಿ ಅಣ್ವಸ್ತ್ರಗಳನ್ನು ಬಳಸುತ್ತಾರೆ.

_ ಎಲ್ಲಾ ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯ ಮೇಲೆ ಹಕ್ಕು ಇರುತ್ತದೆ.

ಈ ವಾಕ್ಯದಲ್ಲಿರುವ ಅತ್ಯಂತ ಅಣ್ವಸ್ತ್ರ ಮತ್ತು ಪಿತ್ರಾರ್ಜಿತ ಎಂಬ ಪದವನ್ನು ಗಮನಿಸಿ.

ಅತಿ + ಅಂತ > ಅತ್ಯಂತ

ತ್ + ಇ + ಅಂ > ತ್ + ಯ್ + ಅಂ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಇ ಕಾರಕ್ಕೆ ಪರಪದದ ಆದಿಯಲ್ಲಿರುವ ಅ ಕಾರ ಸೇರಿ ಸಂಧಿಯಾದಾಗ ಇ ಕಾರದ ಬದಲಿಗೆ ಯ್ ಕಾರ ಆದೇಶವಾಗಿದೆ. 

ಅಣು + ಅಸ್ತ್ರ > ಅಣ್ವಸ್ತ್ರ

ಣ್ + ಉ + ಅ > ಣ್ + ಉ + ಅ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಉ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಅ’ ಕಾರ 

ಸೇರಿ ಸಂಧಿಯಾದಾಗ ‘ಉ’ ಕಾರದ ಬದಲಿಗೆ ‘ವ್’ ಕಾರ ಆದೇಶವಾಗಿದೆ.

ಪಿತೃ + ಆರ್ಜಿತ > ಪಿತ್ರಾರ್ಜಿತ

ತ್ + ಋ + ಆ > ತ್ + ರ್ + ಆ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಋ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಆ’ ಕಾರ ಸೇರಿ ಸಂಧಿಯಾದಾಗ ‘ಋ’ ಕಾರದ ಬದಲಿಗೆ ‘ರ್’ ಕಾರ ಆದೇಶವಾಗಿದೆ.

ಸೂತ್ರ : ಇ ಈ ಕಾರಗಳಿಗೆ ‘ಯ್’ ಕಾರವೂ ಉ ಊ ಕಾರಗಳಿಗೆ ‘ವ್’ ಕಾರವೂ ‘ಋ’ ಕಾರಕ್ಕೆ ‘ರ್’ ಕಾರವೂ ಆದೇಶವಾಗಿ ಬಂದರೆ ಅದು ಯಣ್ ಸಂಧಿ.

ಉದಾ: ಅತ್ಯವಸರ, ಜಾತ್ಯತೀತ, ಕೋಟ್ಯಧೀಶ, ಪ್ರತ್ಯುತ್ತರ, ಮನ್ವಾದಿ, ಮನ್ವಂತರ.

ಸಂಸ್ಕೃತ ವ್ಯಂಜನ ಸಂಧಿಗಳು :

ಜಶ್ತ್ವಸಂಧಿ 

ಸಂಸ್ಕೃತ ವ್ಯಾಕರಣದಲ್ಲಿ ವರ್ಗೀಯ ವ್ಯಂಜನದ ವರ್ಗ ತೃತೀಯಾಕ್ಷರಗಳಾದ ಗ್ ಜ್ ಡ್ ದ್ ಬ್ 

ಅಕ್ಷರಗಳನ್ನು ‘ಜಶ್’ ಎಂಬ ಸಂಜ್ಞೆಯಿಂದ ಕರೆಯಲಾಗಿದೆ. ಈ ಜಶ್ ಅಕ್ಷರಗಳು ಆದೇಶವಾಗಿ ಬರುವ

ಸಂಧಿಗಳೇ ಜಶ್ತ್ವ ಸಂಧಿ.

 - ಷಣ್ಮುಖನಿಗೆ ಷಡಾನನ ಎಂಬ ಹೆಸರೂ ಇದೆ.

 ಈ ವಾಕ್ಯದಲ್ಲಿರುವ ಷಡಾನನ ಪದರಚನೆಯನ್ನು ಗಮನಿಸಿ

 ಷಟ್ + ಆನನ > ಷಡಾನನ

 ಟ್ + ಆ > ಡ್ + ಆ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಟ’ ಕಾರಕ್ಕೆ (ವರ್ಗದ ಪ್ರಥಮಾಕ್ಷರಕ್ಕೆ) ಪರಪದದ 

ಆದಿಯಲ್ಲಿರುವ ‘ಆ’ ಕಾರ ಪರವಾಗಿ ಸಂಧಿಯಾದಾಗ ‘ಡ್’ ಕಾರ (ಅದೇ ವರ್ಗದ ತೃತೀಯಾಕ್ಷರ ಅಂದರೆ ಜಶ್ ಅಕ್ಷರಗಳಲ್ಲಿ ಒಂದು) ಆದೇಶವಾಗಿ ಬಂದಿದೆ. 

ಸೂತ್ರ: ಪೂರ್ವಪದದ ಕೊನೆಯಲ್ಲಿರುವ ವರ್ಗ ಪ್ರಥಮಾಕ್ಷರಕ್ಕೆ ಅಂದರೆ ಕ್ ಚ್ ಟ್ ತ್ಪ್ ಪ್  ಗಳಿಗೆ ಅದೇ ವರ್ಗದ ತೃತೀಯಾಕ್ಷರಗಳು ಅಂದರೆ ಗ್ ಜ್ ಡ್ ದ್ ಬ್ ಗಳು ಅಂದರೆ ಜಶ್ ಅಕ್ಷರಗಳು ಆದೇಶವಾಗಿ ಬಂದರೆ ಅದೇ ಜಶ್ತ್ವಸಂಧಿ

ಉದಾ: ವಾಗ್ದೇವಿ, ಅಜಂತ, ಷಡಂಗ, ಚಿದಾನಂದ, ಅಬ್ಧಿ.

ಶ್ಚುತ್ವಸಂಧಿ

ಶ್ ಚ್ ಛ್ ಜ್ ಝ್ ಞ್ - ಈ ಆರು ಅಕ್ಷರಗಳನ್ನು ‘ಶು’್ಚ ಎಂಬ ಸಂಜ್ಞೆಯಿಂದ ಕರೆಯಲಾಗಿದೆ. ‘ಶ್ಚು’ ಅಕ್ಷರಗಳು ಆದೇಶವಾಗಿ ಬರುವ ಸಂಧಿಗಳೇ ಶ್ಚುತ್ವ ಸಂಧಿ.

- ಮಾನವನಿಗೆ ಮನಶ್ಶುದ್ಧಿ ಇರಬೇಕು

 ಈ ವಾಕ್ಯದಲ್ಲಿರುವ ಮನಶ್ಶುದ್ಧಿ ಪದವನ್ನು ಗಮನಿಸಿ

 ಮನಸ್ + ಶುದ್ಧಿ > ಮನಶ್ಶುದ್ಧಿ

 ಸ್ + ಶ್ + ಉ > ಶ್ + ಶ್ + ಉ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ‘ಸ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಶ’ ಕಾರ ಪರವಾಗಿ 

ಸಂಧಿಯಾದಾಗ ಪೂರ್ವಪದದ ಅಂತ್ಯದ ‘ಸ’ ಕಾರಕ್ಕೆ ‘ಶ’ ಕಾರ ಆದೇಶವಾಗಿ ಬಂದಿರುವುದು. 

ಸೂತ್ರ: ಸ ಕಾರ ತ ವರ್ಗಗಳಿಗೆ ಶ ಕಾರ ಚ ವರ್ಗಗಳು ಅಂದರೆ ಶ್ಚು ಅಕ್ಷರಗಳು ಆದೇಶವಾಗಿಬಂದರೆ ಅಂತಹ ಸಂಧಿಗಳೇ ಶ್ಚುತ್ವ ಸಂಧಿ.

ಉದಾ: ಪಯಶ್ಶಯನ, ಶರಚ್ಚಂದ್ರ, ಜಗಜ್ಜ್ಯೋತಿ.

ಅನುನಾಸಿಕಸಂಧಿ

ಅನುನಾಸಿಕ ಅಕ್ಷರಗಳಾದ ಙ್ ಞ್ ಣ್ ನ್ ಮ್ ಗಳು ಆದೇಶವಾಗಿ ಬರುವ ಸಂದಿಯೇ ಅನುನಾಸಿಕ ಸಂಧಿ. 

ಉದಾ: ವಾಕ್ + ಮಯ > ವಾಙ್ಮಯ

 ಕ್ + ಮ್ + ಅ > ಙ್ + ಮ್ + ಅ

ಇಲ್ಲಿ ಪೂರ್ವಪದದ ಕೊನೆಯ ಅಕ್ಷರವಾದ ‘ಕ’ ಕಾರಕ್ಕೆ ಪರಪದದ ಆದಿಯಲ್ಲಿರುವ ‘ಮ’ಕಾರ ಪರವಾಗಿ ಸಂಧಿಯಾದಾಗ ‘ಕ’ ಕಾರದ ಬದಲಿಗೆ ಅದೇ ವರ್ಗದ ಅನುನಾಸಿಕ ಅಕ್ಷರ ‘ಙ’ಕಾರ ಆದೇಶವಾಗಿ ಬಂದಿದೆ.

ಸೂತ್ರ : ವರ್ಗದ ಪ್ರಥಮಾಕ್ಷರಗಳಿಗೆ ಯಾವುದೇ ಅನುನಾಸಿಕ ಅಕ್ಷರಗಳು ಪರವಾದರೂ ಅವುಗಳಿಗೆ ಅಂದರೆ ವರ್ಗದ ಪ್ರಥಮಾಕ್ಷರಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳು ಆದೇಶವಾಗಿಬಂದರೆ ಅದು ಅನುನಾಸಿಕ ಸಂಧಿ.

ಉದಾ: ವಾಙ್ಮಯ, ಷಣ್ಮುಖ, ಸನ್ಮಾನ.