ಪುಟಗಳು

ಶಬ್ದಾರ್ಥಗಳು

ಪದಗಳ ಅರ್ಥ

೧.ನೀರು- ಸಲಿಲ, ಉದಕ, ಜಲ.

೨.ಬಂಧುರ- ಸುಂದರ.

೩.ಉಡು- ನಕ್ಷತ್ರ, ತಾರೆ, ಬೆಳ್ಳಿಚುಕ್ಕಿ.

೪.ತರು - ಮರ, ವೃಕ್ಷ, ದ್ರುಮ.

೫.ತಾನ-ಆಲಾಪ.

೬.ತಾಣ-ಸ್ಥಳ.

೭.ಇಂಚರ- ಮಧುರ ಸ್ವರ.

೮.ದರ್ಪಣ-ಕನ್ನಡಿ.

೯.ಮಾರುತ-ಗಾಳಿ, ವಾಯು, ಪವನ.

೧೦.ಸಂಕುಲ- ಗುಂಪು, ಸಮೂಹ, ತತಿ.

೧೧.ವಿಲಾಸ-ವೈಭವ

೧೨.ಪ್ರಪುಲ್ಲ-ಅರಳು.

೧೩.ಅಸ್ತಂಗತ- ಮುಳುಗು, ಕಣ್ಮರೆಯಾಗು.

೧೪.ಅಜ-ಬ್ರಹ್ಮ,

೧೫.ಪಂಕ್ತಿ-ಸಾಲು.

೧೬.ಮಲಿನತೆ-ಕೊಳಕು.

೧೭.ಕಣಿ-ಭವಿಷ್ಯ.

೧೮.ಸುಧೆ-ಅಮೃತ.

೧೯.ನಿಷ್ಕಾಮ-ಫಲಾಪೇಕ್ಷೆ ಇಲ್ಲದ.

೨೦.ಉಪನ್ಯಾಸ-ಭಾಷಣ.

೨೧.ಆರಾಧ್ಯ - ಪೂಜನೀಯ.

೨೨.ಆರಾಧ್ಯದೈವ-ಕುಲದೇವರು, ಮನೆದೇವರು, ಆರಾಧನಾದೈವ.

೨೩.ಅನನ್ಯ- ಅದ್ವಿತೀಯ, ಒಂದೇ, ಬೇರೆಯಲ್ಲ, ಪ್ರಥಮ.

೨೪.ಜೀರ್ಣೋದ್ಧಾರ- ಹಳೆಯದನ್ನು ದುರಸ್ತಿ ಮಾಡಿ ನವೀನಗೊಳಿಸುವುದು.

೨೫.ಆಂದೋಲನ-ಚಳವಳಿ.

೨೬.ಉಲ್ಲಂಘನೆ-ಮೀರು.

೨೭.ಬರ್ಬರ-ಅನಾಗರಿಕ.

೨೮.ಆಮಿಷ-ಆಸೆ.

೨೯.ಸ್ಥೈರ್ಯ-ಎದೆಗಾರಿಕೆ, ಧೈರ್ಯ.

೩೦.ಪರಮ-ಶ್ರೇಷ್ಠ, ಉತ್ತಮ.

೩೧.ಮಿಡಿ-ಸ್ಪಂದಿಸು.

೩೨.ಸಂಘಟನೆ-ಗುಂಪು.

೩೩.ಸಮಗ್ರತೆ-ಅಖಂಡತೆ.

೩೪.ಹಾಸುಹೊಕ್ಕು-ಅನ್ಯೋನ್ಯ, ಸಾಮರಸ್ಯ.

೩೫.ಮೌಲ್ಯಶಿಕ್ಷಣ-ನೈತಿಕಶಿಕ್ಷಣ.

೩೬.ಉಪದ್ರವ-ಅನಿಷ್ಟ , ಕೇಡು, ಕಾಟ.

೩೭.ವಿಚಲಿತ-ಹಿಂದೆ ಸರಿ.

೩೮.ಭುಗಿಲಿಡು-ಕೆರಳು, ಆರ್ಭಟಿಸು, ಪ್ರಜ್ವಲಿಸು.

೩೯.ಹುಟ್ಟುಹಾಕು- ಜನ್ಮನೀಡು, ಪ್ರಾರಂಭಿಸು, ಆರಂಭಿಸು.

೪೦.ರೋಚಕ-ರೋಮಾಂಚಕ.

೪೧.ಒಪ್ಪ-ರೀತಿ.

೪೨.ಸಂಭಾರ-ಪರಿಕರ.

೪೩.ಹೆಗ್ಗಡೆ-ಮುಂದಾಳು.

೪೪.ಒಡಂಬಡು-ಒಪ್ಪು.

೪೫.ಋಣ-ಸಾಲ.

೪೬.ಪಾಶ-ಹಗ್ಗ.

೪೭.ಇಂಗುದಿ ಮರ- ಕಾರೇಗಿಡ (ಗೊಬ್ಬುಳಿ, ಬೊಬ್ಬುಳಿ), ಬೇಲಿಯಲ್ಲಿರುವ ಮುಳ್ಳಿನ ಗಿಡ.

೪೮.ಹಾಯಗೊಡು-ಬರಗೊಡು.

೪೯.ಭೂಮಿಕೆ-ಅಡಿಗಲ್ಲು.

೫೦.ಕರತಾಡನ-ಚಪ್ಪಾಳೆ

೫೧.ಬಟ್ಟೆ-(೧).ವಸ್ತ್ರ, (೨).ದಾರಿ. (ನಾನಾರ್ಥಕ ಪದ)

೫೨.ಆಕ್ಷೇಪ- ವಿರೋಧ.

೫೩.ಉದ್ಧಾರ-ಅಭಿವೃದ್ಧಿ.

೫೪.ವ್ಯತಿರಿಕ್ತ-ವಿರುದ್ಧ.

೫೫.ಪುನೀತ- ಪವಿತ್ರ.

೫೬.ಸ್ತಬ್ಧ-ಮೌನ.

೫೭.ವಿಧ್ಯುಕ್ತ-ವಿಧಿವತ್ತಾಗಿ, ವ್ಯವಸ್ಥಿತವಾಗಿ.

೫೮.ಧೀಮಂತ-ವೀರ, ವಿವೇಕಶಾಲಿ.

೫೯.ಅಗಸಿ- ಊರಿನ ಹೆಬ್ಬಾಗಿಲು.

೬೦.ಸಬೂಬು-ಸಾಕ್ಷಿ.

೬೧.ಶರ-ಬಾಣ.

೬೨.ಕಬರ-ಗಮನ.

೬೩.ಚಕ್ಕಡಿ-ಎತ್ತಿನ ಬಂಡಿ.

೬೪.ಕೂರ್ಗಣೆ-ಅರಿತವಾದ ಬಾಣ.

೬೫.ಪಟಗ-ರುಮಾಲು.

೬೬.ಹರೆಯ-ಪ್ರಾಯ.

೬೭.ಪ್ರವೀಣ - ತಿಳಿದವನು.

೬೮.ಪ್ರಣತಿ- ಹಣತೆ,ದೀಪ.

೬೯.ವಿನೀತ- ಸರಳ,ನಮ್ರ,ಆಡಂಬರವಿಲ್ಲದ.

೭೦.ಸ್ಥಿತಪ್ರಜ್ಞ - ಹೊಗಳಿಕೆ ತೆಗಳಿಕೆಗಳೆರಡನ್ನೂ ಸಮಾನವಾಗಿ ಪರಿಗಣಿಸುವವನು.

೭೧.ಮುಗಿಲು-ಮೋಡ.

೭೨.ಊಡಿ-ಕುಡಿಸಿ.

೭೩.ಮುಗುಳು-ಮೊಗ್ಗು.

೭೪.ಹೊದರು-ಪೊದರು.

೭೫.ನರುಗಂಪು-ಪರಿಮಳ.

೭೬.ಇರುಳು-ರಾತ್ರಿ.

೭೭.ತಮ-ಕತ್ತಲು.

೭೮ಜೋಗುಳ-ಮಕ್ಕಳನ್ನು ಮಲಗಿಸುವಾಗ ಹಾಡುವ ಹಾಡು, ಲಾಲಿಹಾಡು.

೭೯.ಸೈತಿಡು-ಸಮಾದಾನಪಡಿಸು.

೮೦.ಸೈಪಿಡು-ಸಂತೃಪ್ತಿಪಡಿಸು.


ಏನಾದರೂ ತಪ್ಪಿದ್ದಲ್ಲಿ ಕ್ಷಮಿಸಿ ಮತ್ತು ಕೆಳಗೆ ಕಾಮೆಂಟ್ನಲ್ಲಿ ತಪ್ಪನ್ನು ನಮಗೆ ತಿಳಿಸಿ, 

ವಂದನೆಗಳು🙏🙏🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ